ಸಿದ್ದರಾಮನ ಹುಂಡಿಯಿಂದ ಮುಖ್ಯಮಂತ್ರಿ ಗದ್ದುಗೆಯವರೆಗೆ!

siddaramaiah-launches-new-fund-for-early-stage-ventures-promises-business-friendly-measures-for-startups

ಕರ್ನಾಟಕ ರಾಜ್ಯದಲ್ಲಿ ಅನೇಕ ರಾಜಕಾರಣಿಗಳು ಆಗಿಹೋಗಿದ್ದಾರೆ. ಕೆಲವರು ತಮ್ಮ ಪ್ರಖರ ನಾಯಕತ್ವ, ಜನಪರ ಕಾಳಜಿ, ಅಭಿವೃದ್ಧಿಯಯೆಡೆಗಿನ ನಡೆಯಿಂದಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಆದರೆ ರಾಜಕಾರಣಿಗಳೆನಿಸಿಕೊಂಡ ಹಲವರು ಸ್ವಾರ್ಥ ಸಾಧನೆ, ಭ್ರಷ್ಟಾಚಾರ, ಅನಾಚಾರಗಳಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಕಪ್ಪುಚುಕ್ಕೆಗಳಾಗಿದ್ದಾರೆ. ಪ್ರಸಕ್ತ ದಿನಮಾನಗಳಲ್ಲಿ ಜನಪರ ಕಾಳಜಿ, ಅಭಿವೃದ್ಧಿಪರ ಚಿಂತನೆಯಂತಹ ಉದಾತ್ತ ಮನೋಭಾವವನ್ನು ಹೊಂದಿದ ರಾಜಕಾರಣಿಗಳಿರುವುದು ಬೆರಳೆಣಿಕೆಯಷ್ಟು ಮಾತ್ರ! ಅಂತಹ ಕೆಲವೇ ಕೆಲವು ಜನನಾಯಕರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು ನಮ್ಮ ನಾಡಿನ ಹೆಮ್ಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು.

   ಸಿದ್ದರಾಮಯ್ಯನವರ ಬದುಕು ನಿಜಕ್ಕೂ ಪ್ರೇರಣಾದಾಯಕವಾದದ್ದು. ಅವರು ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ, ದುಡ್ಡಿನಬಲದಿಂದ ಅಧಿಕಾರ ಹಿಡಿದವರಲ್ಲ. ಬದಲಿಗೆ ತಮ್ಮ ಪರಿಣಾಮಕಾರಿ ನಾಯಕತ್ವ, ಶೋಷಿತರ ಪರ ಧ್ವನಿ, ದೂರದರ್ಶಿತ್ವದಿಂದಾಗಿ ಜನಮನವನ್ನು ಗೆದ್ದವರು. 1948ರ ಆಗಸ್ಟ್ 12ರಂದು ಜನಿಸಿದ ಸಿದ್ದರಾಮಯ್ಯನವರು ತಮ್ಮ ಬಾಲ್ಯವನ್ನು ಕಳೆದದ್ದು ಹುಟ್ಟೂರಾದ ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಸಿದ್ದರಾಮನ ಹುಂಡಿ ಗ್ರಾಮದಲ್ಲಿ. ದನ ಮೇಯಿಸುವ ಕಾಯಕದಲ್ಲಿ ತೊಡಗಿದ್ದ ಅವರಲ್ಲಿದ್ದ ಪ್ರತಿಭೆಯನನ್ನು ಕಂಡು ಶಿಕ್ಷಕರೊಬ್ಬರು ನೇರವಾಗಿ 4ನೇ ತರಗತಿಗೆ ಪ್ರವೇಶ ನೀಡಿ ಶಿಕ್ಷಣದತ್ತ ಮುಖಮಾಡಿಸಿದರು. ನಂತರ ಕಾಲೇಜು ಶಿಕ್ಷಣಕ್ಕಾಗಿ ಮೈಸೂರಿಗೆ ತೆರಳಿದ ಸಿದ್ದರಾಮಯ್ಯನವರು, ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ ಪದವೀಧರರಾಗಿ ಶಾರದಾ ವಿಲಾಸ ಕಾಲೇಜಿಗೆ ಕಾನೂನು ವಿದ್ಯಾಭ್ಯಾಸಕ್ಕಾಗಿ ಸೇರ್ಪಡೆಗೊಂಡರು. “ನನ್ನನ್ನು ವೈದ್ಯನನ್ನಾಗಿ ಮಾಡಬೇಕೆಂಬುದು ಅಪ್ಪನ ಆಸೆಯಾಗಿತ್ತು” ಎಂದು ತಂದೆಯ ಕನಸನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ ಅವರು.

   ಕೆಲಕಾಲ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ ಸಿದ್ದರಾಮಯ್ಯನವರು ನಂತದ ದಿನಗಳಲ್ಲಿ ವಕೀಲಿ ವೃತ್ತಿಗಿಳಿದರು. ಆದರೆ ಅವರ ಒಳಗಿದ್ದ ಜನನಾಯಕ ಸದಾ ಶೋಷಿತ ವರ್ಗಗಳ ಪರ ಮಿಡಿಯುತ್ತಿದ್ದ. ಅವರಿಗಾಗಿ ಕೆಲಸ ಮಾಡುವ ಹಂಬಲದಲ್ಲಿದ್ದ. ಅದೇ ಸಮಯದಲ್ಲಿ ಡಾ.ರಾಮಮನೋಹರ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದ ಸಿದ್ದರಾಮಯ್ಯನವರು, 1978ರಲ್ಲಿ ರಾಜಕಾರಣಕ್ಕೆ ಅಧಿಕೃತ್ವಾಗಿ ಪ್ರವೇಶ ಮಾಡಿ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು. ಇದೇ ವೇಳೆ ರೈತಪಪರ ಚಳುವಳಿಯಲ್ಲಿ ತೊಡಗಿಸಿಕೊಂಡ ಅವರಿಗೆ ಪ್ರೊ.ಎಂ.ಡಿ ನಂಜುಂಡ ಸ್ವಾಮಿಯವರ ಒಡನಾಟ ಲಭಿಸಿತು.

   1980ರಲ್ಲಿ ಮೊದಲಬಾರಿಗೆ ಮೈಸೂರು ಲೋಕಸಭೆ ಕ್ಷೇತ್ರದಿಂದ ಸಿದ್ದರಾಮಯ್ಯನವರು ಚುನಾವಣಾ ಅಖಾಡಕ್ಕಿಳಿದರು. ಆದರೆ ಆಗ ಗೆಲುವು ದೊರೆಯಲಿಲ್ಲ. ಅದೇ ಅನುಭವವನ್ನು ತಮ್ಮ ರಾಜಕೀಯ ದಾರಿಯ ಹಾಸನ್ನಾಗಿ ಬಳಸಿಕೊಂಡರು. ಆ ನಂತರ 1983ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಮ್ಮ ಜೈತಯಾತ್ರೆ ಆರಂಭಿಸಿದ ಸಿದ್ದರಾಮಯ್ಯನವರು ನಂತರದ ದಿನಗಳಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ.

   ಹೀಗೆ ಸಾಮಾನ್ಯ ವ್ಯಕ್ತಿಯೊಬ್ಬ ಯಾವುದೇ ಹಣಬಲವಿಲ್ಲದೆ, ರಾಜಕೀಯ ಹಿನ್ನೆಲೆಯಿಲ್ಲದೆ ರಾಜ್ಯದ ಮುಖ್ಯಮಂತ್ರಿಯಾಗುವ ಹಂತಕ್ಕೆ ಬೆಳೆದು ನಿಂತಿದ್ದಾನೆಂದರೆ ನಿಜಕ್ಕೂ ಯುವಪೀಳಿಗೆಗೆ ಅದು ಆದರ್ಶಪ್ರಾಯವಾದದ್ದು. ಜನನಾಯಕನೆಂದರೆ ಹೇಗಿರಬೇಕು ಎನ್ನುವುದನ್ನು ಸಿದ್ದರಾಮಯ್ಯನವರು ತಮ್ಮ ಕೃತಿಯ ಮೂಲಕ ತೋರಿಸಿಕೊಡುತ್ತಿದ್ದಾರೆ. ಇಂತಹ ರಾಜಕೀಯ ಮುತ್ಸದ್ದಿ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿರುವುದು ನಮ್ಮ ಹೆಮ್ಮೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s