‘ಬರ’ಕ್ಕೆ ಹೆದರದ ಸಿದ್ದರಾಮಯ್ಯ ಸರ್ಕಾರ

ದೇಶದ ಬಹುತೇಕ ರಾಜ್ಯಗಳು ಬರದ ಭೀಕರತೆಯನ್ನು ಅನುಭವಿಸುತ್ತಿವೆ. ಕರ್ನಾಟಕದಲ್ಲೂ ಸಹ ಬರ ಪರಿಸ್ಥಿತಿಯಿದ್ದರೂ, ಸಿದ್ದರಾಮಯ್ಯ ಸರ್ಕಾರ ಕೈಗೊಂಡ ಅಗತ್ಯ ಕ್ರಮಗಳಿಂದಾಗಿ ಜನರು ತೀವ್ರತರವಾದ ತೊಂದರೆ ಅನುಭವಿಸುತ್ತಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಸಹ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿರುವ ಸರ್ಕಾರ, ತನ್ನ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ಬರಪೀಡಿತ ನಾಡಿನಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 sid

 ಕುಡಿಯುವ ನೀರಿಗೆ ಹಾಹಾಕಾರ ಕೇಳಿಬಂದ ಬೆನ್ನಲ್ಲೇ ತಕ್ಷಣ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕುಡಿಯುವ ನೀರಿಗಾಗಿ ಹೆಚ್ಚುವರಿ 100 ಕೋಟಿ ರೂ.ನೀಡಲು ನಿರ್ಧರಿಸಿರುವ ಸರ್ಕಾರ, ಎಲ್ಲಿಯೂ ಸಹ ನೀರಿಗಾಗಿ ತೊಂದರೆ ಆಗಬಾರದೆಂಬ ಕಾಳಜಿ ವಹಿಸಿದೆ. ಇದರ ಜೊತೆ ಜೊತೆಗೆ ಇನ್ನೊಂದು ಮಹತ್ವದ ನಿರ್ಧಾರವೆಂದರೆ ಬೇಸಿಗೆಯಲ್ಲೂ ಬಿಸಿ ಊಟ ನೀಡುವುದು. ಸರ್ಕಾರಿ ಶಾಲೆಗಳಿಂದ ಮಕ್ಕಳು ವಿಮುಖರಾಗದಂತೆ ನೋಡಿಕೊಳ್ಳಲು ಬೇಸಿಗೆಯಲ್ಲೂ ಅಂದರೆ ರಜಾದಿನಗಳಲ್ಲೂ ಬಿಸಿಯೂಟ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

   ರಾಜ್ಯದ ಜನ ಬರದ ಬವಣೆ ಅನುಭವಿಸಬಾರದೆಂಬ ಉದ್ದೇಶದಿಂದ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ಜಾನುವಾರುಗಳಿಗೂ ನೀರು, ಆಹಾರ, ನೆರಳು, ಔಷಧ ಇದ್ಯಾವುದಕ್ಕೂ ಕಡಿಮೆಯಾಗದಂತೆ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಅಗತ್ಯವಿರುವೆಡೆಯೆಲ್ಲ ಸ್ಥಾಪಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದುವರೆಗೆ ಒಟ್ಟೂ 2,060 ಕೋಟಿ ರೂ.ಗಳನ್ನು ಬರ ಪರಿಹಾರ ಕಾರ್ಯಕ್ಕೆ ಸರ್ಕಾರ ಖರ್ಚು ಮಾಡಿದೆ. ಇದರ ಹೊರತಾಗಿ ಜಿಲ್ಲಾಧಿಕಾರಿಗಳ ಬಳಿ 357 ಕೋಟಿ ರೂ.ನಷ್ಟು ಹಣವಿದೆ. ಸರ್ಕಾರ ಈಗ ಬಿಡುಗಡೆಗೆ ನಿರ್ಧರಿಸಿರುವ ಹಣ ಇದೆಲ್ಲದರ ಹೊರತಾದದ್ದು.

   ಆಗಲೇ ಹೇಳಿದಂತೆ ಅಗತ್ಯವಿರುವೆಡೆಯೆಲ್ಲ ಗೋಶಾಲೆ ನಿರ್ಮಿಸಲು 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನು ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 800 ಕೋಟಿ ರೂ.ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿದೆ. ಬರ ಅಧ್ಯಯನ ನಡೆಸಲೂ ಕ್ರಮ ತೆಗೆದುಕೊಳ್ಳಲಾಗಿದೆ. ಬರ ಅಧ್ಯಯನಕ್ಕಾಗಿ ಸಚಿವರ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಖುದ್ದು ಸಚಿವರೇ ಬರಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಇದೇ ತಿಂಗಳ 30ರೊಳಗೆ ಮುಖ್ಯಮಂತ್ರಿಗಳಿಗೆ ವರದಿ ನೀಡಲಿದ್ದಾರೆ.

   ಹೀಗೆ ಸರ್ಕಾರವು ಬರದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಸಿದ್ದರಾಮಯ್ಯನವರು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಬರ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿರುವ ಅವರು, ಎರಡನೇ ಹಂತದ ಪ್ರವಾಸವನ್ನು ಸಧ್ಯದಲ್ಲೇ ಕೈಗೊಳ್ಳಲಿದ್ದಾರೆ. ಜನರ ಕಷ್ಟಗಳಿಗೆ ಕಿವಿಯಾಗಿ, ಕಣ್ಣಿರಿಗೆ ಹೆಗಲಾಗಿ ಸಿದ್ದರಾಮಯ್ಯನವರು ಅನವರತ ಕಾರ್ಯೋನ್ಮುಖರಾಗಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s