ಬರದ ನಾಡಿನಲ್ಲಿ ಸಿದ್ದರಾಮಯ್ಯ

12973014_996756480372816_5341761263762638056_o

ರಾಜ್ಯದಲ್ಲಿ ಬರ ತಾಂಡವವಾಡತೊಡಗಿದೆ. ಬಿಸಿಲಿನ ಛಳ ಕೆಂಡದಂತೆ ನಿಗಿ ನಿಗಿ ಎನ್ನುತ್ತಿದೆ. ಜನರು ಕುಡಿಯುವ ನೀರಿಗಾಗಿ, ಜಾನುವಾರುಗಳು ಮೇವು-ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗುವ ಸಾಧ್ಯತೆ ಇತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಜನಜೀವನ ಅಸ್ಥವ್ಯಸ್ಥವಾಗುವ ಹಂತ ತಲುಪಿಲ್ಲ. ಈ ವಿಷಯದಲ್ಲಿ ನಿಜಕ್ಕೂ ಕಾಂಗ್ರೆಸ್ ಸರ್ಕಾರವನ್ನು ಅಭಿನಂದಿಸಲೇಬೇಕು. ಜನರ ಕಷ್ಟವನ್ನು ತಿಳಿಯಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದು ಶ್ಲಾಘನೀಯ.

 12968161_996724497042681_7619578807459489234_o

 ಸಿದ್ದರಾಮಯ್ಯನವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಕಂಡು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಮಾಧ್ಯಮಗಳು ಮುಖ್ಯಮಂತ್ರಿಗಳ ಇಂತಹ ಮಹತ್ವದ ಭೇಟಿಯನ್ನೂ ಸಹ ಟೀಕಿಸುತ್ತಿರುವುದು ವಿಷಾದನೀಯ. ಮಾಧ್ಯಮಗಳ ಪ್ರಕಾರ ಸಿದ್ದರಾಮಯ್ಯನವರು ಕೇವಲ ಬೇಟಿ ನೀಡುತ್ತಿದ್ದಾರೆ. ಯಾವುದೇ ಪರಿಹಾರ ರೂಪಕ ಮಾತುಕತೆ ನಡೆಸುತ್ತಿಲ್ಲ ಎಂದು. ವಿಷಯವನ್ನು ಸರಿಯಾಗಿ ಅರಿಯದೇ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಇನ್ನೊಂದಿರಲಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿದಾಗ ಮಾತ್ರ ಇದು ಅರಿವಿಗೆ ಬರುತ್ತದೆ.

12973412_996724477042683_7093930193772152721_o

   ಬೀದರ್ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಇಂದು (15-04-16) ಪರಿಶೀಲಿಸಿದ್ದಾರೆ. 2015-16ನೇ ಸಾಲಿನಲ್ಲಿ ಇನ್‍ಪುಟ್ ಸಬ್ಸಿಡಿ ವಿತರಣೆಗಾಗಿ ರೂ.89.85 ಕೋಟಿ ಬಿಡುಗಡೆ ಮಾಡಲಾಗಿದ್ದು, 2.38 ಲಕ್ಷ ರೈತರಿಗೆ ರೂ.79.88 ಕೋಟಿ ವಿತರಿಸಲಾಗಿದೆ. 31-03-16ರಂದು ಮತ್ತೆ ರೂ.60.99 ಕೋಟಿ ಬಿಡುಗಡೆ ಮಾಡಲಾಗಿದೆ ಹಾಗೂ 15 ದಿನಗಳಲ್ಲಿ ವಿತರಣೆ ಮಾಡಲು ಸೂಚಿಸಲಾಗಿದೆ. ತುರ್ತು ಕುಡಿಯುವ ನೀರು ಪೂರೈಕೆಗಾಗಿ ಒಟ್ಟಾರೆ ರೂ.24.85 ಕೋಟಿ ಬಿಡುಗಡೆ ಮಾಡಲಾಗಿದೆ. ವಿಪರ್ಯಾಸವೆಂದರೆ ಇದ್ಯಾವುದೂ ಮಾಧ್ಯಮಗಳ ಅರಿವಿಗೆ ಬಾರದಿರುವುದು! ಬಂದರೂ ಪೂರ್ವಾಗ್ರಹ ಪೀಡಿತರಾಗಿ ಟೀಕಾ ಪ್ರವೃತ್ತಿ ಮುಂದುವರೆಸುತ್ತಿರುವುದು.

   ಇಷ್ಟೇ ಅಲ್ಲ, 30 ಗ್ರಾಮಗಳಿಗೆ ಖಾಸಗಿ ಕೊಳವೆ/ತೆರೆದ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. 35 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಸಾಧ್ಯವಾದಷ್ಟು ಹೆಚ್ಚು ಹೆಚ್ಚು ನೀರು ಪೂರೈಕೆ ಮಾಡಲು ಸೂಚಿಸಲಾಗಿದೆ. ಇದೆಲ್ಲವನ್ನು ಯಾಕೆ ಮಾಡಲಾಗುತ್ತಿದೆ? ಜನರು ತೊಂದರೆ ಅನುಭವಿಸಬಾರದು ಎಂದಲ್ಲವೇ? ಆದರೂ ಸಹ ಟೀಕಾಕಾರರ ಕಣ್ಣಿಗೆ ಇದು ಕಾಣುತ್ತಿಲ್ಲ!

 12977274_996756517039479_4687256437857240760_o

ಇನ್ನು ಜಾನುವಾರುಗಳಿಗೆ ತೊಂದರೆ ಆಗಬಾರದೆಂಬ ಸಿದ್ದರಾಮಯ್ಯನವರ ಆಶಯದಂತೆ, ಎಲ್ಲಾ ತಾಲೂಕುಗಳಲ್ಲಿ ಅವಶ್ಯವಿರುವಷ್ಟು ಮೇವು ಬ್ಯಾಂಕ್ ಮತ್ತು ಗೋಶಾಲೆಗಳನ್ನು ಒಂದು ವಾರದೊಳಗೆ ನೀರು, ನೆರಳು, ಔಷಧ, ಮೇವಿನೊಂದಿಗೆ ಪ್ರಾರಂಭಿಸಲು ಸೂಚಿಸಲಾಗಿದೆ. ಇದೆಲ್ಲವೂ ಸಹ ಜನರ ಒಳಿತಿಗಾಗಿ ತಾನೇ? ಸಿದ್ದರಾಮಯ್ಯನವರು ಇಷ್ಟೆಲ್ಲ ಅವಶ್ಯ ಕ್ರಮಗಳನ್ನು ಕೈಗೊಂಡಿದ್ದರೂ ಸಹ ನಕಾರಾತ್ಮಕವಾಗಿ ಬಿಂಬಿಸುತ್ತಿರುವವರಿಗೆ ಏನನ್ನೋಣ? ಅದೆಲ್ಲ ಏನೇ ಇರಲಿ, ಮುಖ್ಯಮಂತ್ರಿಗಳು ಜನರ ಹಿತಾಸಕ್ತಿಗಾಗಿ ಏನೆಲ್ಲ ಬೇಕೋ ಅದೆಲ್ಲವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದ್ದಾರೆ. ಬರದ ಭೀಕರತೆಯನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

12983971_996756427039488_1138417670863127359_o

Advertisements

One thought on “ಬರದ ನಾಡಿನಲ್ಲಿ ಸಿದ್ದರಾಮಯ್ಯ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s