ಕೇಂದ್ರ ಬಜೆಟ್‍ಗಿಂತ ಕರ್ನಾಟಕದ ಬಜೆಟ್ ಹೆಚ್ಚು ಸಮರ್ಥ!

03 (1)

ಭಾರತದ ಅಭಿವೃದ್ಧಿ ಎಂದರೆ ಅದು ಪ್ರತಿ ರಾಜ್ಯಗಳ ಅಭಿವೃದ್ಧಿಯ ಒಟ್ಟೂ ಮೊತ್ತ. ರಾಜ್ಯ-ರಾಜ್ಯಗಳು ಸೇರಿ ದೇಶವಾಗಿ, ಪ್ರತಿ ರಾಜ್ಯದ ಬೆಳವಣಿಗೆಯೇ ದೇಶದ ಬೆಳವಣಿಗೆಯ ಚಿತ್ರ ನೀಡುತ್ತದೆ. ಆಯಾ ವರ್ಷದ ಕೇಂದ್ರ ಹಾಗೂ ರಾಜ್ಯದ ಬಜೆಟ್‍ಗಳು ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. 2016-17ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ದೇಶದ ಹಾಗೂ ನಮ್ಮ ರಾಜ್ಯದ ಬಜೆಟ್ ಅನ್ನು ಗಮನಿಸಿದರೆ ಕುತೂಹಲಕಾರಿಯಾದ ಅಂಶಗಳು ಗಮನ ಸೆಳೆಯುತ್ತವೆ.

   ಕೇಂದ್ರದಲ್ಲಿ ಮಂಡನೆಯಾದ ಬಜೆಟ್‍ನ ಗಾತ್ರ ರೂ.19.7 ಟ್ರಿಲಿಯನ್ ಹಾಗೂ ಕರ್ನಾಟಕದ ಬಜೆಟ್ ಗಾತ್ರ 1.63 ಟ್ರಿಲಿಯನ್. ಬಜೆಟ್ ಗಾತ್ರವನ್ನು ಸರಾಸರಿ ತೆಗೆದುಕೊಂಡು ಲೆಕ್ಕಾಚಾರ ಹಾಕಿದರೆ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರೆ ಆಶ್ಚರ್ಯವಾಗಬಹುದು! ಹೌದು, ವಾಸ್ತವದಲ್ಲಿ ಕೇಂದ್ರ ಬಜೆಟ್‍ಗಿಂತ ನಮ್ಮ ರಾಜ್ಯದ ಬಜೆಟ್ ಹೆಚ್ಚು ಸಮರ್ಥವಾಗಿದೆ.

   ರಾಜ್ಯದ ಸ್ಥಿತಿಗತಿಯನ್ನು ಗಮನಿಸಿದರೆ, ಸಂಪನ್ಮೂಲ ಕ್ರೋಢಿಕರಣದಲ್ಲಿ ಗಣನೀಯ ಏರಿಕೆಯಾಗಿದೆ. ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಲೆಕ್ಕಾಚಾರದ ಬಜೆಟ್ ಮಂಡನೆ ಮಾಡಿ ಆರ್ಥಿಕ ತಜ್ಞರಿಂದ ಸೈ ಎನಿಸಿಕೊಂಡಿದೆ. ಕೇಂದ್ರ ಬಜೆಟ್‍ನ ಒಟ್ಟೂ ಗಾತ್ರದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೆ 14,967 ರೂ.ನಷ್ಟು ಮೀಸಲಿರಿಸಲಾಗಿದೆ. ಅದೇ ಕರ್ನಾಟಕದ ಬಜೆಟ್‍ನಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಮೀಸಲಿರಿಸಲಾದ ಮೊತ್ತ 24,732 ರೂ.! ಜನಸಾಮಾನ್ಯನಿಗೆ ಕೇಂದ್ರ ಸರ್ಕಾರ ವಿನಿಯೋಗಿಸುವ ಎರಡರಷ್ಟು ಹಣವನ್ನು ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಗೋಸ್ಕರ ವಿನಿಯೋಗಿಸುತ್ತಿದೆ. ಹುಸಿ ಆಶ್ವಾಸನೆ ನೀಡಿ, ಜನವಿರೋಧಿ ನೀತಿ ಅನುಸರಿಸುವವರಿಗೆ ಮಾದರಿಯಾಗಿದೆ ಕರ್ನಾಟಕದ 2016-17ನೇ ಸಾಲಿನ ಬಜೆಟ್.

   ಸಾಮಾಜಿಕ ನ್ಯಾಯ ಹಾಗೂ ಆಧುನಿಕ ಮುನ್ನೋಟಗಳನ್ನು ಸಂಯೋಜನೆಗೊಳಿಸಿಕೊಂಡು ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರು ಜನತೆಯೆ ಪ್ರೀತಿಗೆ ಪಾತ್ರರಾಗಿದ್ದಾರೆ. ಆದರೆ ವಿಪಕ್ಷಗಳ ನಾಯಕರು ಯಾವುದೋ ಭ್ರಮೆಗೊಳಗಾದವರಂತೆ ಟೀಕಿಸುತ್ತಲೇ ಇದ್ದಾರೆ. ಅದೆಷ್ಟರ ಮಟ್ಟಿಗೆಂದರೆ, ಬಜೆಟ್‍ನ ಅಂಶಗಳನ್ನು ಸರಿಯಾಗಿ ಅಧ್ಯಯನ ಮಾಡದೇ ‘ಬಜೆಟ್ ನಿರಾಶಾದಾಯಕ, ಬಡವರ ಮೇಲೆ ಹೊರೆ’ ಇತ್ಯಾದಿಯಾಗಿ ಬಡಬಡಿಸುತ್ತಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್‍ನ ಬೆಲೆಗಳನ್ನು ಕೇಂದ್ರ 4 ಬಾರಿ ಪರಿಷ್ಕರಿಸಿತು. ಆದರೆ ವರ್ಷದ ಮಧ್ಯಭಾಗದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಪರಿಷ್ಕರಣೆ ಮಾಡಲಿಲ್ಲ. ಬಜೆಟ್‍ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‍ನ ಮೇಲಿನ ತೆರಿಗೆ ಹೆಚ್ಚು ಮಾಡಿರುವುದು ಬಡವರ ಮೇಲೆ ಹೊರೆ ಹಾಕಿದಂತೆ ಎನ್ನುವ ಮಾತಿನಲ್ಲಿ ಅರ್ಥವೇ ಇಲ್ಲ. ಏಕೆಂದರೆ ಬಡವರ ಸರಕಿನ ಮೇಲಿನ ತೆರಿಗೆಯನ್ನು ಶೇ.14.5ರಿಂದ ಶೇ.5.5ಕ್ಕೆ ಇಳಿಸಲಾಗಿದೆ. ಅಂದರೆ ಶೇ.9ರಷ್ಟು ಇಳಿಕೆ! ಜನಸಾಮಾನ್ಯರ ಬಗ್ಗೆ ಹೆಚ್ಚಿನ ಕಾಳಜಿ ಇದೆ ಎಂದು ತೋರ್ಪಡಿಸಿಕೊಳ್ಳುತ್ತಿರುವ ಬಿಜೆಪಿ, ಕೇಂದ್ರ ಸರ್ಕಾರದಲ್ಲಿರುವ ತಮ್ಮದೇ ಪಕ್ಷವನ್ನು ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಸುವಂತೆ ಯಾಕೆ ಒತ್ತಾಯಿಸುತ್ತಿಲ್ಲ?

   ಒಂದು ದಿನದ ವಿಧಾನ ಪರಿಷತ್ ಬಜೆಟ್ ಅಧಿವೇಶನಕ್ಕೆ 34 ಲಕ್ಷ ರೂ. ಖರ್ಚಾಗುತ್ತದೆ. ಬಜೆಟ್ ಮೇಲೆ ಚರ್ಚೆ ನಡೆಸದೆ, ಕೇವಲ ಧರಣಿ-ಪ್ರತಿಭಟನೆ ಎನ್ನುತ್ತಾ ಕಾಲಹರಣ ಮಾಡುವ ಪ್ರತಿಪಕ್ಷಗಳಿಂದಾಗಿ 1.36 ಕೋಟಿ ರೂ. ವ್ಯರ್ಥವಾಗಿದೆ. ಜನಪರ ಎಂದು ಬೊಬ್ಬೆ ಹಾಕುವವರಿಗೆ ತಾವು ಕಳೆಯುತ್ತಿರುವ ಹಣದ ಬಗ್ಗೆ ಏಕೆ ಗೊತ್ತಾಗುತ್ತಿಲ್ಲ? ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಾ ಮುನ್ನಡೆಯುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಕೃತಿಯ ಮೂಲಕವೇ ತಕ್ಕ ಉತ್ತರ ನೀಡುತ್ತಿದೆ. ಬರಿ ಬಾಯಿಮಾತಿಗೆ ರಾಜ್ಯದ ಜನ ಮರುಳಾಗಲಾರರು ಎನ್ನುವುದು ಪ್ರತಿಪಕ್ಷಗಳಿಗೆ ತಿಳಿದಿದ್ದರೆ ಒಳಿತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s