ಉಪನ್ಯಾಸಕರ ಮುಷ್ಕರ, ವಿದ್ಯಾರ್ಥಿಗಳ ಭವಿಷ್ಯ ದುಸ್ತರ!

sddefault

ಉಪನ್ಯಾಸಕರು ‘ಕುಮಾರ್ ನಾಯಕ್ ವರದಿ ಜಾರಿಗೆ ತನ್ನಿ’ ಎಂದು ಪಟ್ಟು ಹಿಡಿದು ಕುಳಿತುಬಿಟ್ಟಿದ್ದಾರೆ. ಅತ್ತ ‘ವೇತನ ತಾರತಮ್ಯ ಹೋಗಲಾಡಿಸಿ’ ಎಂದು ಪ್ರತಿಭಟನೆ ನಡೆಯುತ್ತಿದ್ದರೆ, ಇತ್ತ ವಿದ್ಯಾರ್ಥಿಗಳು ಫಲಿತಾಂಶದ ಕುರಿತು ಆತಂಕಗೊಂಡಿದ್ದಾರೆ. ಸರಿಯಾದ ಸಮಯಕ್ಕೆ ಫಲಿತಾಂಶ ಪ್ರಕಟವಾಗದಿದ್ದರೆ ವಿದ್ಯಾರ್ಥಿಗಳ ಮುಂದಿನ ಹಂತದ ವಿದ್ಯಾಭ್ಯಾಸದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಆದರೆ ಪ್ರತಿಭಟನಾ ನಿರತ ಉಪನ್ಯಾಸಕರು ಈ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ. ಬದಲಿಗೆ ವಿದ್ಯಾರ್ಥಿಗಳ ಭವಿಷ್ಯವನ್ನು ಮುಂದಿಟ್ಟುಕೊಂಡು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ.

   ಮೇ 2ರಂದು ಫಲಿತಾಂಶ ನೀಡುವ ಮಹತ್ತರ ಜವಾಬ್ದಾರಿ ಸರ್ಕಾರದ ಮೇಲಿದೆ. ಅದಕ್ಕೆ ತಕ್ಕಂತೆ ಸರ್ಕಾರ ಕೂಡ ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಕುಮಾರ್ ನಾಯಕ್ ವರದಿ ಪ್ರಕಾರ ವೇತನ ತಾರತಮ್ಯ ನಿವಾರಿಸುವುದಾದರೆ ಉಪನ್ಯಾಸಕರ ಮೂಲ ವೇತನದಲ್ಲಿ ರೂ.2,600 ಹೆಚ್ಚಳ ಮಾಡಬೇಕಾಗುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ರಾಜ್ಯವು ಆರ್ಥಿಕವಾಗಿಯೂ ತೊಂದರೆ ಅನುಭವಿಸದಂತೆ, ಉಪನ್ಯಾಸಕರಿಗೂ ಅನ್ಯಾಯವಾಗದಂತೆ ವೇತನ ತಾರತಮ್ಯ ಸರಿಪಡಿಸಲು ಸರ್ಕಾರವು ರೂ.40 ರಿಂದ 50 ಕೋಟಿ ನೀಡಲು ಸಿದ್ಧವಿದೆ. ಆದರೆ ಉಪನ್ಯಾಸಕರು ಇದಕ್ಕೆ ಒಪ್ಪುತ್ತಿಲ್ಲ, ವಿದ್ಯಾರ್ಥಿಗಳ ಸಂಕಷ್ಟದ ಬಗ್ಗೆಯೂ ಯೋಚಿಸುತ್ತಿಲ್ಲ.

   ಪ್ರತಿಯೊಂದು ಕ್ಷೇತ್ರಕ್ಕೂ ಇಂತಿಷ್ಟು ಹಣ ಎಂದು ರಾಜ್ಯ ಸರ್ಕಾರ ನಿಗದಿಪಡಿಸಿ ಆರ್ಥಿಕ ಲೆಕ್ಕಾಚಾರಗಳನ್ನು ಹಾಕಿರುತ್ತದೆ. ಅದನ್ನು ಸರಿದೂಗಿಸಿಕೊಂಡು, ರಾಜ್ಯದ ಬೊಕ್ಕಸಕ್ಕೂ ಹೊರೆಯಾಗದಂತೆ ಕಾರ್ಯ ನಿರ್ವಹಿಸುವ ಜವಾಬ್ದಾರಿ ಸರ್ಕಾರದ್ದು. ಆದರೆ ಒಮ್ಮಿದೊಂಮ್ಮೆಲೆ ‘ವೇತನವನ್ನು ಇಂತಿಷ್ಟು ಹೆಚ್ಚಳ ಮಾಡಬೇಕು, ಇಲ್ಲವಾದಲ್ಲಿ ನಾವು ಮೌಲ್ಯಮಾಪನ ಮಾಡುವುದಿಲ್ಲ’ ಎನ್ನುವ ಮೊಂಡುತನವನ್ನು ಉಪನ್ಯಾಸಕರೇ ತೋರಿಸುತ್ತಿರುವುದು ವಿಪರ್ಯಾಸ! ತಾವು ಪಾಠ ಮಾಡಿದ ಮಕ್ಕಳ ಭವಿಷ್ಯದ ಜೊತೆ ತಾವೇ ಆಟವಾಡುತ್ತಿದ್ದೇವೆ ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವುದು ಉಪನ್ಯಾಸಕ ವರ್ಗಕ್ಕೆ ಶೋಭೆ ತರಲಾರದು.

   ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಎನ್ನುವಂತೆ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪಕರೂ ಮೌಲ್ಯಮಾಪನದ ಬಹಿಷ್ಕಾರದ ಬೆದರಿಕೆ ಒಡ್ಡಿದ್ದಾರೆ. ‘ತಮಗೂ ಕೂಡ ಕುಮಾರ್ ನಾಯಕ್ ವರದಿ ಜಾರಿ ಮಾಡಿ’ ಎಂದು ಪಟ್ಟು ಹಿಡಿಯುವ ಸೂಚನೆ ನೀಡಿದ್ದಾರೆ. ಅಂದರೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಶಿಕ್ಷಕರು ಆಟವಾಡುವ ಯೋಚನೆಯಲ್ಲಿದ್ದಾರೆ. ಉಪನ್ಯಾಸಕರು ಹಾಗೂ ಶಿಕ್ಷಕರು ಸರ್ಕಾರದ ಜವಾಬ್ದಾರಿಯ ಬಗ್ಗೆಯೂ ಚಿಂತಿಸಬೇಕು. ಹಂತ ಹಂತವಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವತ್ತ ಯೋಚಿಸಬೇಕು. ಇದುವರೆಗೂ ಸರ್ಕಾರ ಅವರ ಬೇಡಿಕೆಗೆ ನಕಾರಾತ್ಮಕ ಉತ್ತರ ನೀಡಿಲ್ಲ. ಆದರೆ ಆರ್ಥಿಕವಾಗಿ ಹೊರೆಯಾಗದಂತೆ ಸಂಧಾನ ಮಾಡಿಕೊಳ್ಳಲು ಮುಂದಾಗುತ್ತಿದೆ. ಆದರೆ ಇದ್ಯಾವುದೂ ಉಪನ್ಯಾಸಕರಿಗೆ ಅರ್ಥವಾಗದಿರುವುದು ವಿಷಾದ. ದಯವಿಟ್ಟು ವಿದ್ಯಾರ್ಥಿಗಳ ಭವಿಷ್ಯ ಜೊತೆ ಆಟವಾಡದೇ ಫಲಿತಾಂಶ ನೀಡುವತ್ತ ಚಿತ್ತ ಹರಿಸಿ. ಇಲ್ಲವಾದಲ್ಲಿ, ಸರ್ಕಾರ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದೆ. ಅದು ನಿಮ್ಮ ಅವಮಾನಕ್ಕೆ ಕಾರಣವಾದಲ್ಲಿ ಅದಕ್ಕೆ ನೀವೇ ಹೊಣೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s