ನೈತಿಕತೆಗೆ ತಿಲಾಂಜಲಿಯಿಟ್ಟ ಬಿಜೆಪಿ

ಬಿYeddu

   ಜೆಪಿಯಲ್ಲಿ ಸಂಭ್ರಮ ಮನೆಮಾಡಿದೆ. ಆದರೆ ಆ ಸಂಭ್ರಮ ತೋರಿಕೆಯದೋ ಅಥವಾ ಅಸಲಿಯದ್ದೋ ಎನ್ನುವುದು ಬೇರೆ ಪ್ರಶ್ನೆ. ಅಷ್ಟಕ್ಕು ಸಂಭ್ರಮಕ್ಕೆ ಕಾರಣ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿರುವ ವ್ಯಕ್ತಿ. ಹೌದು, ಯಾವ ಬಿಜೆಪಿಯಿಂದ ಹೊರನಡೆದು (ಹೊರದಬ್ಬಿಸಿಕೊಂಡಿದ್ದು ಎನ್ನುವುದು ಅತ್ಯಂತ ಕಠಿಣ ಪದವಾಗುವುದರಿಂದ) ಮತ್ತೆ ಮರಳಿ ಇದೀಗ ರಾಜ್ಯಾಧ್ಯಕ್ಷ ಸ್ಥಾನ ಪಡೆದ ಬಿ.ಎಸ್ ಯಡಿಯೂರಪ್ಪನವರನ್ನು ಮೆಚ್ಚಲೇಬೇಕು. ಜೊತೆಗೆ ಈ ವ್ಯಕ್ತಿಯ ನಾಯಕತ್ವ ಒಪ್ಪಿಕೊಂಡ ಬಿಜೆಪಿಯವರ ನೈತಿಕತೆಯಾಚಿನ ನಡೆಗೆ ದೊಡ್ಡ ನಮಸ್ಕಾರ ಮಾಡಲೇಬೇಕು.

   ಭಾರತೀಯ ಸಂಸ್ಕøತಿ, ಸಂಸ್ಕಾರ, ಪರಂಪರೆ ಎಂದೆಲ್ಲ ಬಡಬಡಿಸುವವರು ಕೇಸರಿ ಮುಖಂಡರು. ಆದರೆ ಅವರ ಎಲ್ಲ ಮಾತು-ಪ್ರಲಾಪಗಳು ಕೇವಲ ಭಾಷಣಕ್ಕಷ್ಟೇ ಸೀಮಿತ ಎನ್ನುವುದನ್ನು ಇದೀಗ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅದು ಹೇಗೆ ಎಂಬ ಪ್ರಶ್ನೆಗೆ ಮುಂದಿದೆ ಉತ್ತರ ಓದಿ. ಬಿಜೆಪಿಯ ಪ್ರಬಲ ಲಿಂಗಾಯಿತ ನಾಯಕ ಯಡಿಯೂರಪ್ಪನವರು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣ ಎನ್ನುವುದು ಕೇಸರಿಗಳ ಮಾತು. ಅದಕ್ಕೆ ಪೂರಕವಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಗದ್ದುಗೆಗೇರಿದ್ದೂ ಆಯಿತು. ಆದರೆ ನಂತರದ ಬೆಳವಣಿಗೆಗಳು ಮಾತ್ರ ಇಡೀ ಕರ್ನಾಟಕವೇ ತಲೆತಗ್ಗಿಸುವಂತೆ ಮಾಡಿದವು. ಸಿಕ್ಕ ಅಧಿಕಾರವನ್ನು ಭ್ರಷ್ಟಾಚಾರ ಮಾಡಲು ಉಪಯೋಗಿಸಿಕೊಂಡ ಯಡಿಯೂರಪ್ಪ, ಲೋಕಾಯುಕ್ತದ ಬಲೆಗೆ ಬಿದ್ದರು. ಅಲ್ಲಿಂದ ಶುರುವಾಗಿದ್ದೇ ಯಡಿಯೂರಪ್ಪನವರ ಮತ್ತೊಂದು ಅಧ್ಯಾಯ.

   ಯಾವಾಗ ಭ್ರಷ್ಟಾಚಾರ ಮಾಡಿ ಯಡಿಯೂರಪ್ಪ ಸಿಕ್ಕಿಬಿದ್ದರೋ, ಬಿಜೆಪಿಯಿಂದ ಅವರನ್ನು ತೆಗೆದುಹಾಕಲಾಯಿತು. ಇದರಿಂದ ಕುದ್ದುಹೋದ ಯಡಿಯೂರಪ್ಪ ಬಿಜೆಪಿಗೆ ಸೆಡ್ಡು ಹೊಡೆಯಲು ‘ಕೆಜೆಪಿ’ ಎಂಬ ಪಕ್ಷ ಕಟ್ಟಿದರು. ಕೆಜೆಪಿಯ ವೇದಿಕೆ ಮೇಲೆ ನಿಂತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು, ತೆಗಳಿದರು, ಸವಾಲು ಹಾಕಿದರು, ಕಂಡಕಂಡ ದೇವರ ಮೇಲೆ ಆಣೆ ಮಾಡಿ ‘ನಾನಿನ್ನು ಬಿಜೆಪಿಯತ್ತ ಮುಖ ಮಾಡಲಾರೆ’ ಎಂದು ಘಂಟಾಘೋಷವಾಗಿ ಸಾರಿದರು. ಆದರೆ ಕೊನೆಗಾದದ್ದೇನು? ಬಿಸಿಯೆಲ್ಲ ಆರಿದ ಮೇಲೆ ಕೆಜೆಪಿ ಬಿಜೆಪಿಯ ಜೊತೆ ವಿಲೀನವಾಗಿಹೋಯಿತು.

   ಮತ್ತೆ ಬಿಜೆಪಿಗೆ ಮರಳಿದ ಯಡಿಯೂರಪ್ಪ ತಮ್ಮ ಬಲವಿನ್ನೂ ಕುಗ್ಗಿಲ್ಲ ಎನ್ನುವ ಸಂದೇಶ ರವಾನೆಯಾಗುವಂತೆ ನೋಡಿಕೊಂಡರು. ಕೊನೆಯದಾಗಿ ಇದೀಗ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಪಕ್ಷದೊಳಗೆ ತಮ್ಮ ವರ್ಚಸ್ಸು ಕುಂದಿಲ್ಲ ಎಂದು ಸಾಬೀತುಪಡಿಸಿದ್ದಾರೆ. ಅದೆಲ್ಲ ಏನೇ ಇದ್ದರೂ, ಬಿಜೆಪಿ ‘ತನಗೆ ಅಧಿಕಾರ ಮುಖ್ಯ, ನೈತಿಕತೆಯಲ್ಲ’ ಎನ್ನುವುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಒಬ್ಬ ಭ್ರಷ್ಟನನ್ನು ತನ್ನ ‘ನಾಯಕ’ ಎಂದು ಒಪ್ಪಿಕೊಂಡಿದೆಯೆಂದರೆ, ಬಿಜೆಪಿಯ ರೋಗಗ್ರಸ್ಥ ಮನಃಸ್ಥಿತಿಯನ್ನು ಊಹಿಸಬಹುದು. ನೈತಿಕತೆಗೆ ತಿಲಾಂಜಲಿ ಇಟ್ಟಿರುವ ಕೇಸರಿ ಪಡೆ ಅಧಿಕಾರದ ದಾಹದಿಂದ ದುಮುಗುಡುತ್ತಿದೆ. ಇದೀಗ ಅವರಿಗೆ ಹೆಚ್ಚಿನ ಅಧಿಕಾರದ ಹೊರತು ಬೇರೇನೂ ಬೇಡ.

   ಅದಕ್ಕೆ ಹೇಳುವುದು ‘ಹೇಳುವುದು ಒಂದು, ಮಾಡುವುದು ಮತ್ತೊಂದು’ ಎಂದು. ಇದೀಗ ಅದಕ್ಕೆ ಸೂಕ್ತ ಉದಾಹರಣೆಯಾಗಿ ಭ್ರಷ್ಟ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸಿರುವ ಬಿಜೆಪಿ ಕಣ್ಣಮುಂದಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s