ಸಿದ್ಧಾಂತಕ್ಕೆ ಬದ್ಧ ನಾಯಕ ಸಿದ್ದರಾಮಯ್ಯ

photo_31“ದೇವರಾಜು ಅರಸು ಸತ್ತಿಲ್ಲ, ಸಿದ್ದರಾಮಯ್ಯನವರಲ್ಲಿ ಅವರು ಹುದುಗಿಕೊಂಡಿದ್ದಾರೆ” ಹೀಗೆಂದು ಹೇಳಿದವರು ಜ್ಞಾನಪೀಠ ಪುರಸ್ಕøತ ದಿ.ಅನಂತಮೂರ್ತಿಯವರು. ನಿರ್ಗತಿಕರು, ಬಡಗೇಣೀದಾರರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ತಳಸಮುದಾಯದವರು ಮತ್ತು ಅಲಕ್ಷಿತರ ದನಿಯಾಗಿ ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದೇ ಉಳಿದಿರುವವರು ದೇವರಾಜು ಅರಸು. ಅವರ ನಂತರದ ದಿನಗಳಲ್ಲಿ ತಳಸಮುದಾಯದವರ, ಅಲಕ್ಷಿತರ, ಶೋಷಿತರ ಸಮರ್ಥ ನಾಯಕರಾಗಿ ಯಾರೂ ಹೊರಹೊಮ್ಮಿರಲಿಲ್ಲ. ಓಟಿಗಾಗಿ ಮಾತ್ರ ಓಲೈಕೆ ಮಾಡುತ್ತಿದ್ದ ನಾಯಕರ ಮಧ್ಯೆ ನೋವುನುಂಗುತ್ತಿದ್ದ ‘ಅಹಿಂದ’ ವರ್ಗಕ್ಕೆ ಆಶಾಕಿರಣವಾಗಿ ಉದಯಿಸಿದವರು ಸಿದ್ದರಾಮಯ್ಯ!

   ಲೋಹಿಯಾವಾದವನ್ನು ಒಪ್ಪಿ-ಅಪ್ಪಿರುವ ಸಿದ್ದರಾಮಯ್ಯನವರು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕೂಡ ತಮ್ಮ ತತ್ವ-ಸಿದ್ಧಾಂತಗಳನ್ನು ಗಾಳಿಗೆ ತೂರಿದವರಲ್ಲ. ಅವರ ರಾಜಕೀಯ ಜೀವನವನ್ನು ಅವಲೋಕಿಸಿದರೆ ಅದು ವಿಧಿತವಾಗುತ್ತದೆ. 1999ರಲ್ಲಿ ಜನತಾದಳ ವಿಭಜನೆಯಾಯಿತು. ಅವರ ರಾಜಕೀಯ ಗುರುಗಳಾದ ಜಾರ್ಜ್ ಫರ್ನಾಂಡೀಸ್, ಭಾರತೀಯ ಜನತಾ ಪಕ್ಷದ ಜೊತೆ ಕೈಜೋಡಿಸಿ, ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. ಇಂತಹ ಸಂದರ್ಭದಲ್ಲಿ ತಮ್ಮ ರಾಜಕೀಯ ನೆಲೆ ಪ್ರದರ್ಶಿಸಲು ಸಂಯುಕ್ತ ಜನತಾದಳದ ಜೊತೆ ಗುರುತಿಸಿಕೊಳ್ಳಬಹುದಿತ್ತು. ಆದರೆ ಜಾತ್ಯಾತೀತ ಜನತಾದಳ ಸೇರಿ ‘ತಾವು ಯಾವುದೇ ಸಂದರ್ಭದಲ್ಲೂ ಕೋಮುವಾದಿಯಾಗಲು ಸಾಧ್ಯವಿಲ್ಲ’ ಎನ್ನುವ ಸಂದೇಶವನ್ನು ಜನರಿಗೆ ನೀಡಿದರು.

   ಆನಂತರದ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯನವರು ‘ಅಹಿಂದ’ದ ಪ್ರಬಲ ನಾಯಕನಾಗಿ ಹೊರಹೊಮ್ಮಿದರು. ಅವರ ಸಾಮಥ್ರ್ಯಕ್ಕೆ ತಕ್ಕ ಬೆಲೆ ಸಿಗದಿದ್ದಾಗ ಪರಿಣಾಮಕಾರಿಯಾಗಿ ಜನಸೇವೆಯಲ್ಲಿ ತೊಡಗಿಕೊಳ್ಳಲು ಕಾಂಗ್ರೆಸ್ ಪ್ರವೇಶ ಮಾಡಿದರು. 2009ರ ಲೋಕಸಭಾ ಚುನಾವಣೆಯ ನಂತರ ವಿಧಾನಸಭಾ ವಿರೋಧಪಕ್ಷದ ನಾಯಕನಾಗಿ ಜವಾಬ್ದಾರಿ ಹೊತ್ತರು ಸಿದ್ದರಾಮಯ್ಯ. ವಿಧಾನಸಭಾ ಕಲಾಪಗಳಲ್ಲಿ ತಮ್ಮ ಆಕ್ರಮಣಕಾರಿ ವ್ಯಕ್ತಿತ್ವ ಪ್ರದರ್ಶಿಸಿ ತಮ್ಮ ದೂರದರ್ಶಿತ್ವದ ಹಾಗೂ ಭವಿಷ್ಯದ ನಡೆಯ ಬಗ್ಗೆ ಪರಿಚಯ ಮಾಡಿಕೊಟ್ಟರು.

   ವಿಧಾನಸಭಾ ಅಧಿವೇಶನದಲ್ಲಿ ಗಣಿಧಣಿ ಕುಖ್ಯಾತಿಯ ಜನಾರ್ಧನ ರೆಡ್ಡಿಯವರ ಸವಾಲು ಸ್ವೀಕರಿಸಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಸಿದ್ದರಾಮಯ್ಯನವರು ನಡೆಸಿದ ಪಾದಯಾತ್ರೆ, ಅವರ ಜನಪ್ರಿಯತೆಗೆ ಸಾಕ್ಷಿಯಾಯಿತು. ಅದರಲ್ಲಿ ಜನರು ಸಾಗರೋಪಾದಿಯಾಗಿ ತೊಡಗಿಸಿಕೊಂಡಿದ್ದು ‘ಅವರ ನಾಯಕತ್ವದ ಅವಶ್ಯಕತೆ ರಾಜ್ಯದ ಜನತೆಗಿದೆ’ ಎನ್ನುವ ಸ್ಪಷ್ಟ ಜನಾದೇಶವಾಗಿತ್ತು. 2013ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಯಾವುದೇ ಪ್ರತಿರೋಧವಿಲ್ಲದೇ ಮುಖ್ಯಮಂತ್ರಿ ಗದ್ದುಗೆಗೇರಿದರು. ದೇವರಾಜ ಅರಸು ವರು 1972ರ ವಿಧಾನಸಭಾ ಚುನಾವಣೆಯಲ್ಲಿ ಎದುರಳಿಯೇ ಇಲ್ಲದೆ ಮುಖ್ಯಮಂತ್ರಿಯಾಗಿದ್ದರು. ಅದೇ ಸಂದರ್ಭ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವ ಸಮಯದಲ್ಲಿ ಮತ್ತೆ ಮರುಕಳಿಸಿತ್ತು. ‘ದೇವರಾಜು ಅರಸುರವರೇ ಮತ್ತೆ ಸಿದ್ದರಾಮಯ್ಯನವರ ರೂಪದಲ್ಲಿ ಬಂದಿದ್ದಾರೆ’ ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿ ಬಂದಿದ್ದವು ಎಂದರೆ ಸಿದ್ದರಾಮಯ್ಯನವರ ಕಾರ್ಯವೈಖರಿ ಎಂತಹುದಿರಬುದೆಂದು ಊಹಿಸಬಹುದು.

   ಸಿದ್ದರಾಮಯ್ಯನವರ ರಾಜಕೀಯದ ಹಾದಿಯನ್ನು ಅಧ್ಯಯನ ಮಾಡಿದರೆ ಪ್ರತಿ ಹೆಜ್ಜೆಯಲ್ಲೂ ಸ್ವಂತ-ಸ್ವತಃ ರಾಜಕೀಯ ತಂತ್ರಗಾರಿಕೆ ಹೆಣೆದು ಯಶಸ್ಸಿನ ಶಿಖರ ತಲುಪಿದ್ದು ಎದ್ದು ಕಾಣುತ್ತದೆ. ಯಾರದೇ ಹಂಗಿಲ್ಲದೇ-ಯಾರಿಗೂ ತಲೆಬಾಗದೇ ದಿಟ್ಟ ಹೆಜ್ಜೆಯನ್ನಿಡುತ್ತಿರುವ ಸಿದ್ದರಾಮಯ್ಯನವರು ಕರ್ನಾಟಕದ ಹೆಮ್ಮೆಯ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂಡಿಯಾ ಟುಡೇ ಗ್ರೂಪ್ ನಡೆಸಿದ ಸರ್ವೆಯಲ್ಲಿ ಭಾರತದ 4ನೇ ಜನಪ್ರಿಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ಅವರ ನಾಯಕತ್ವದ ಹಿರಿಮೆಯನ್ನು ಸಾರಿ ಹೇಳುತ್ತದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s