‘ಕ್ಷೀರಭಾಗ್ಯ’ದಿಂದಾಗಿ ಭದ್ರ ಭವಿಷ್ಯ

govt-school-children-enjoys-milk-during-the-86199

ಸರ್ಕಾರಿ ಶಾಲೆಗಳು ಮತ್ತೆ ಸುದ್ದಿ ಮಾಡುತ್ತಿವೆ. ಯಾವುದೇ ಸಮಸ್ಯೆಯಿಂದಲ್ಲ, ಬದಲಿಗೆ ವಿದ್ಯಾರ್ಥಿಗಳನ್ನು ಶಾಲೆಗೆ ಸೆಳೆಯುವಲ್ಲಿ ಯಶಸ್ವಿಯಾಗಿ ಸುದ್ದಿ ಮಾಡುತ್ತಿವೆ! ಹೌದು, ಯಾವ ಸರ್ಕಾರಿ ಶಾಲೆಗಳೆಂದರೆ ಜನ ಮೂಗುಮುರಿಯುತ್ತಿದ್ದರೋ, ಅಂತಹ ಸರ್ಕಾರಿ ಶಾಲೆಗಳು ಇದೀಗ ಗುಣಮಟ್ಟದ ಶಿಕ್ಷಣ, ಮಕ್ಕಳ ಹಾಜರಾತಿ ಹೀಗೆ ಪ್ರತಿಯೊಂದು ವಿಷಯದಲ್ಲೂ ಬೆಳವಣಿಗೆ ದಾಖಲಿಸುತ್ತಿವೆ. ಇದಕ್ಕೆಲ್ಲ ಮೂಲಕಾರಣ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟ!

   ಬಡತನದ ಕಷ್ಟ ಅನುಭವಿಸಿದವರಿಗೇ ಗೊತ್ತು. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿರುವವರಿಗೆ ವಿದ್ಯಾಭ್ಯಾಸದ ಆಸಕ್ತಿ ಹುಟ್ಟುವುದಾದರೂ ಎಲ್ಲಿಂದ? ಆ ದಿನದ ಹೊಟ್ಟೆ ತುಂಬಿಸಿಕೊಳ್ಳುವಿಕೆಯಲ್ಲೇ ಸಮಯ ಕಳೆದುಹೋಗುವಾಗ ಶಾಲೆಗೆ ಹೋಗುವುದಾದರೂ ಹೇಗೆ? ಇಂತಹ ದುಃಸ್ಥಿತಿಯನ್ನು ಗಮನಿಸಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದು ಕ್ಷೀರಭಾಗ್ಯ. ಹೊಟ್ಟೆ ತಂಪಾಗಿದ್ದರೆ ಮಕ್ಕಳೂ ಸಹ ವಿದ್ಯಾಭ್ಯಾಸದೆಡೆಗೆ ಗಮನ ಕೊಡುತ್ತಾರೆ. ಇತ್ತೀಚಿನ ಸಮೀಕ್ಷೆಯೊಂದು ಸಂತೋಷದಾಯಕ ಸಂಗತಿಯನ್ನು ಹೊರಹಾಕಿದೆ. ಕ್ಷೀರಭಾಗ್ಯ ಮತ್ತು ಬಿಸಿಯೂಟದ ಪರಿಣಾಮವಾಗಿ ಶಾಲೆಯನ್ನು ಬಿಡುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅದೇ ರೀತಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಏರಿಕೆಯಾಗಿದೆ.

   “2001ರಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 7 ಲಕ್ಷದಷ್ಟಿತ್ತು! 2016ರ ವೇಳೆಗೆ ಆ ಸಂಖ್ಯೆ 90,000ಕ್ಕಿಳಿದಿದೆ.” ಎಂದು ಸರ್ವ ಶಿಕ್ಷಾ ಅಭಿಯಾನದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 2015-16ನೇ ಸಾಲಿನಲ್ಲಿ ಗಮನಿಸುವುದಾದರೆ ಶಾಲೆಯಿಂದ ಆ ವರ್ಷ ಹೊರಗುಳಿದ ಮಕ್ಕಳ ಸಂಖ್ಯೆ 12,878. ಸರ್ಕಾರಿ ಶಾಲೆಯಲ್ಲಿನ ಬಿಸಿಯೂಟ, ಕ್ಷೀರಭಾಗ್ಯ, ಗುಣಮಟ್ಟದ ಶಿಕ್ಷಣದಿಂದಾಗಿ ಉತ್ತಮ ಫಲಿತಾಂಶ ದೊರೆಯುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರಲ್ಲಿ ಭರವಸೆ ಮೂಡಿದೆ.

   ಸರ್ಕಾರಿ ಶಾಲೆಯಿಂದ ವಿದ್ಯಾರ್ಥಿಗಳು ಹೊರನಡೆಯಲು ಪ್ರಮುಖ ಕಾರಣ ಆರ್‍ಟಿಇ ಕಾಯ್ದೆ. ಕಾಯ್ದೆಯಡಿ ದೊರೆಯುವ ಸೀಟುಗಳನ್ನು ಪಡೆಯಲು ಕೆಲ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಶಾಲೆಯನ್ನು ಬಿಟ್ಟು ಶಿಕ್ಷಣವಂಚಿತರಾಗುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತಿರುವುದನ್ನು ಅಕ್ಷಯ ಪಾತ್ರೆಯಡಿ ಊಟ ಪೂರೈಸುತ್ತಿರುವವರೂ ಗಮನಿಸಿದ್ದಾರೆ. “2013-14ರಲ್ಲಿದ್ದ ಮಕ್ಕಳ ಸಂಖ್ಯೆಗಿಂತ 2015-16ರಲ್ಲಿ 6000ದಷ್ಟು ಹೆಚ್ಚಳವಾಗಿದೆ.” ಎನ್ನುತ್ತಾರೆ ಅವರು.

   ಸರ್ಕಾರಿ ಶಾಲೆಗಳಲ್ಲಿ ದಾಖಲಾಗುವ ಶೇ.99ರಷ್ಟು ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದವರಾಗಿರುತ್ತಾರೆ. ದಿನಗೂಲಿ ಕೆಲಸ ಮಾಡುವವರು ಒಂದು ಹೊತ್ತಿನ ಊಟಕ್ಕೇ ಪರದಾಡುವಾಗ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಹೇಗೆ ನೀಡಿಯಾರು? ಆದರೆ ನಮ್ಮ ಸರ್ಕಾರದ ಬಡವರ ಪರ ನಡೆಯಿಂದ, ‘ಕ್ಷೀರಭಾಗ್ಯ’, ಉಚಿತ ಪಠ್ಯಪುಸ್ತಕಗಳ ವಿತರಣೆಯಿಂದ ಬಡವರ ಮಕ್ಕಳೂ ಭವ್ಯಭವಿಷ್ಯದ ಕನಸು ಕಾಣುವಂತಾಗಿದೆ. ಪಾಲಕರ ಮೊಗದಲ್ಲೂ ಸಂತಸದ ನಗು ಮೂಡಿದೆ. ಕೌಟುಂಬಿಕ ಹಿನ್ನೆಲೆಯ ನೆಪದಲ್ಲಿ ಮಕ್ಕಳು ಶಿಕ್ಷಣವಂಚಿತರಾಗುವುದು ತಪ್ಪಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s