ಕೈಗಾರಿಕಾ ನೀತಿಯೆಂಬ ಆಶಾಕಿರಣ

shutterstock_283332293-[Converted]

ರಾಜ್ಯದ ಜನತೆಯನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡಿ ಗದ್ದುಗೆಗೇರಿದ ಸರ್ಕಾರಗಳನ್ನು ಕರ್ನಾಟಕ ಕಂಡಿದೆ. ವಾಸ್ತವದ ಚಿತ್ರಣವನ್ನು ಮರೆಮಾಚಿ, ಕನಸಿನ ಲೋಕವನ್ನು ತೋರಿಸಿ ವೈಫಲ್ಯವನ್ನು ಕಂಡವರು ಕಣ್ಣೆದುರೇ ಇದ್ದಾರೆ. ಬಡವರ ಹಾಗೂ ಗ್ರಾಮೀಣರ ಪರವಾದ ಸರ್ಕಾರವನ್ನು ಎದುರುನೋಡುತ್ತಿದ್ದ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರ ನಿರಾಶೆ ಮಾಡಲಿಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೆ. ಅಹಿಂದ ಹಿನ್ನೆಲೆಯಿರುವ ಸಿದ್ದರಾಮಯ್ಯನವರ ಕಲ್ಯಾಣ ಯೋಜನೆಗಳು ಲಕ್ಷಾಂತರ ಮಂದಿಗೆ ಸಾಂತ್ವನ ನೀಡಿವೆ.

   ಇದರ ಹೊರತಾಗಿ ಔದ್ಯಮಿಕ ರಂಗದಲ್ಲಿ ಕಾಂಗ್ರೆಸ್ ಸರ್ಕಾರ ಇಟ್ಟ ದಿಟ್ಟ ಹೆಜ್ಜೆ ಶ್ಲಾಘನೀಯ. ಎಸ್.ಎಂ ಕೃಷ್ಣರ ಕಾಲದಿಂದ ಔನ್ಯತ್ಯಕ್ಕೇರಿದ ಬೆಂಗಳೂರಿನ ಉದ್ಯಮ ವಲಯ, ಇಂದು ಬೃಹದಾಕಾರವಾಗಿ ತನ್ನ ಬೇರುಗಳನ್ನು ಇಳಿಬಿಟ್ಟಿದೆ. 80ರ ದಶಕದಲ್ಲಿ ಬೆಂಗಳೂರಿನ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಅನೇಕ ಜಾಗತಿಕ ತಂತ್ರಜ್ಞಾನ ಕಂಪನಿಗಳು ಇಲ್ಲಿ ನೆಲೆಯೂರಿದವು. ಇದು ಐಟಿ ಉದ್ಯಮ ಉತ್ತುಂಗಕ್ಕೇರಲು ಕಾರಣೀಭೂತವಾಯಿತು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಎಸ್.ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೈಗಾರಿಕಾ ನೀತಿಗೆ ರೂಪುರೇಷೆ ನೀಡಿತು. ಬೆಂಗಳೂರನ್ನು ರಾಜ್ಯದ ಆರ್ಥಿಕತೆಯ ಮೂಲನೆಲೆಯನ್ನಾಗಿರಿಸಿಕೊಳ್ಳಲಾಯಿತು.

   ಬೆಂಗಳೂರಿನಲ್ಲಿ ಕೈಗಾರಿಕೆ ಹಾಗೂ ಸೇವಾ ಕ್ಷೇತ್ರದ ಔದ್ಯಮಿಕ ಅಭಿವೃದ್ಧಿಯಾಗುತ್ತಿದ್ದಂತೆ ಸಂಚಾರ ದಟ್ಟಣೆ ಸೇರಿದಂತೆ ಕೆಲ ಹೊಸ ಸಮಸ್ಯೆಗಳು ತಲೆದೋರತೊಡಗಿದವು. ದಟ್ಟಣೆಯನ್ನು ನಿರ್ವಹಿಸಲು ಬೆಂಗಳೂರಿನ ಮೂಲಸೌಕರ್ಯ ವ್ಯವಸ್ಥೆ ವಿಫಲವಾಗುತ್ತಾ ಸಾಗಿದರೂ ನಂತರದ ಸರ್ಕಾರಗಳು ಇದರತ್ತ ದಿವ್ಯಮೌನ ವಹಿಸುತ್ತ ಬಂದವು. ಔದ್ಯಮಿಕ ನೀತಿ ತನ್ನ ವೇಗವನ್ನು ಕಳೆದುಕೊಳ್ಳುವ ಹೊತ್ತಿಗೆ ಜೀವಕಳೆಯನ್ನು ತುಂಬಿದ್ದು ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ.

   2014-19ರ ಕೈಗಾರಿಕಾ ನೀತಿಯು ಬೆಂಗಳೂರಷ್ಟೇ ಅಲ್ಲದೇ ರಾಜ್ಯಾದ್ಯಂತ ಔದ್ಯಮಿಕ ಅಭಿವೃದ್ಧಿಯ ಅವಕಾಶಗಳನ್ನು ಒದಗಿಸುವ ಭರವಸೆ ನೀಡಿದೆ. ಚೆನ್ನೈ-ಬೆಂಗಳೂರು-ಚಿತ್ರದುರ್ಗ ಸಂಪರ್ಕಿಸುವ ಕಾರಿಡಾರ್ ಹಾಗೂ ಬೆಂಗಳೂರು-ಮುಂಬೈ ಸಂಪರ್ಕಿಸುವ ಕಾರಿಡಾರ್ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿದೆ. ಇದರ ಹೊರತಾಗಿ ರಾಜ್ಯದ ಇತರೆಡೆ ಕೈಗಾರಿಕಾ ಅಭಿವೃದ್ಧಿಗಾಗಿ ಏಳು ಕೈಗಾರಿಕಾ ಕಾರಿಡಾರ್‍ಗಳ ಪ್ರಸ್ತಾವನೆಯನ್ನೂ ಮಾಡಲಾಗಿದೆ. ರಾಷ್ಟ್ರೀಯ ಹೂಡಿಕೆ ಹಾಗೂ ಉತ್ಪಾದನಾ ವಲಯಗಳ (ಎನ್.ಐ.ಎಂ.ಝಡ್) ಸ್ಥಾಪನೆಯ ಪ್ರಾಮುಖ್ಯತೆಯನ್ನೂ ಹೊಸ ಔದ್ಯಮಿಕ ನೀತಿಯಲ್ಲಿ ಒತ್ತಿ ಹೇಳಲಾಗಿದೆ. ಇದರ ಮೊದಲ ಹಂತವಾಗಿ ಬೀದರ್, ಕೋಲಾರ, ಕಲಬುರ್ಗಿ ಹಾಗೂ ತುಮಕೂರಿನಲ್ಲಿ ವಲಯಗಳ ಸ್ಥಾಪನೆಗೆ ಅನುಮತಿ ಪಡೆಯುವಲ್ಲಿ ಯಶಸ್ಸು ಕಂಡಿರುವುದು ರಾಜ್ಯ ಸರ್ಕಾರದ ಹೆಗ್ಗಳಿಕೆಯೇ ಸರಿ.

   ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಾಗ ರಾಜ್ಯ ಸರ್ಕಾರ ಪಟ್ಟಿ ಮಾಡಿದ ನಗರಗಳ ಹೆಸರನ್ನು ಗಮನಿಸಿದರೆ ಸಿದ್ದರಾಮಯ್ಯ ಸರ್ಕಾರದ ಲೆಕ್ಕಾಚಾರದ ನಡೆ ಅರ್ಥವಾಗುತ್ತದೆ. ಬೆಂಗಳೂರಿನ ಹೆಸರು ಪಟ್ಟಿಯಲ್ಲಿ ಇಲ್ಲದೇ ಇರುವುದು ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಂಡ ದಿಟ್ಟ-ಪರಿಣಾಮಕಾರಿ ಕಾರ್ಯತಂತ್ರವಾಗಿದೆ. ‘ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಉದ್ಯಮ ಅಭಿವೃದ್ದೀಗೆ ಪ್ರೋತ್ಸಾಹ’, ‘ದಕ್ಷಿಣ ಕನ್ನಡದ ಅಭಿವೃದ್ದಿಗೆ ಅದು ರಾಜ್ಯದ ಒಳನಾಡಿನ ಪ್ರದೇಶಗಳೊಡನೆ ಸಂಪರ್ಕ ಸಾಧಿಸಬೇಕು’ ಎನ್ನುವ ಅಂಶಗಳು ಕಾಂಗ್ರೆಸ್ ಸರ್ಕಾರದ ದೂರದರ್ಶಿತ್ವಕ್ಕೆ ಹಿಡಿದ ಕೈಗನ್ನಡಿ.

   ಈ ಎಲ್ಲ ಅಂಶಗಳಿಗೆ ಸರ್ಕಾರ ಬದ್ಧವಾಗಿದ ಎಂದು ‘ಇನ್‍ವೆಸ್ಟ್ ಕರ್ನಾಟಕ 2016’ ಮೂಲಕ ತೋರಿಸಿಕೊಡಲಾಗಿದೆ. ಬಂಡವಾಳ ಬರಲಿ ಎಂದು ಕಾದು ಕೂರುವ ಬದಲು, ರಾಜ್ಯಾದ್ಯಂತ ರೂಪಿಸಿರುವ ಯೋಜನೆಗಳ ಪಟ್ಟಿಯನ್ನು ತಯಾರಿಸಲಾಯಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿಶಾಲ ವ್ಯಾಪ್ತಿಯ ಔದ್ಯಮಿಕ ಕಾರ್ಯತಂತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಯಶಸ್ಸಿನ ಮುನ್ಸೂಚನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸಕ್ತ ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಔದ್ಯಮಿಕ ವಲಯಕ್ಕೆ ಭದ್ರ ಭವಿಷ್ಯವನ್ನು ರೂಪಿಸಿರುವುದು ಹಾಗೂ ಆರ್ಥಿಕ ಕಾರ್ಯತಂತ್ರ ರೂಪಿಸಿರುವುದು ಮಾದರಿಯಾಗಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s