ಬರದ ಬರೆಗೆ ಮುಖ್ಯಮಂತ್ರಿ ಸಾಂತ್ವನ

CfGUyqDUUAAy4Hu (1)

 ಪ್ರಕೃತಿ ಮುನಿಸಿಕೊಂಡಿದೆಯಾ? ಹೀಗೊಂದು ಪ್ರಶ್ನೆ ಕಾಡಲು ಮುಖ್ಯ ಕಾರಣ ಕರ್ನಾಟಕದ ಹಲವೆಡೆ ತಾಂಡವವಾಡುತ್ತಿರುವ ಬರ! ಈ ಸಲ ಅಪ್ಪಳಿಸಿರುವ ಬರ ಜನರನ್ನು ಹೈರಾಣಾಗಿಸಿದೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾದ ಪರಿಸ್ಥಿತಿಯಿದೆ. ಜನರಿಗಷ್ಟೇ ಅಲ್ಲದೆ, ಜಾನುವಾರುಗಳಿಗೂ ಬರದ ಭೀಕರತೆಯ ಅನುಭವವಾಗತೊಡಗಿದೆ. ಆದರೆ ಇದನ್ನೆಲ್ಲ ಸಮರ್ಥವಾಗಿ ಎದುರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರ್ವಸನ್ನದ್ದವಾಗಿದೆ.

   ಕರ್ನಾಟಕದಲ್ಲಿ ತೀವ್ರ ಬರದ ಪರಿಸ್ಥಿತಿ ಎದುರಿಸುತ್ತಿರುವ ಜಿಲ್ಲೆಗಳೆಂದರೆ ಯಾದಗಿರಿ, ಕೊಪ್ಪಳ, ವಿಜಯಪುರ, ರಾಯಚೂರು, ಕಲ್ಬುರ್ಗಿ, ಧಾರವಾಡ, ಬೆಳಗಾವಿ, ಬೀದರ್, ಬಳ್ಳಾರಿ, ಹಾವೇರಿ, ಗದಗ, ಬಾಗಲಕೋಟೆ. ತೀವ್ರ ಬರದ ಪರಿಸ್ಥಿತಿಯಿದ್ದರೂ ಅದರ ಬಿಸಿ ಜನಸಾಮಾನ್ಯರಿಗೆ ತಲುಪದಿರುವಂತೆ ಸಿದ್ದರಾಮಯ್ಯನವರು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಆಜ್ಞೆ ಮಾಡಿದ್ದಾರೆ. ಇದು ಸಿದ್ದರಾಮಯ್ಯನವರ ಜನಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ.

   ರಾಜ್ಯದ 12 ಜಿಲ್ಲೆಗಳು ತೀವ್ರ ಸ್ವರೂಪದ ಬರವನ್ನು ಕಾಣುತ್ತಿವೆ. ಕೆಲವೆಡೆ ಹಿಂಗಾರು ಮಳೆ ಕೈಕೊಟ್ಟು ಸಮಸ್ಯೆ ಉಂಟುಮಾಡಿದ್ದರೆ, ಇನ್ನೂ ಹಲವೆಡೆ ಬರ ತನ್ನ ಕರಾಳತೆಯನ್ನು ಪ್ರದರ್ಶಿಸುತ್ತಿದೆ. ಆದರೆ ಜನರಿಗೆ ಇದರ ಛಳ ತಾಗದೇ ಇರಲು ಕಾರಣ ಮುಖ್ಯಮಂತ್ರಿಗಳ ಕಾರ್ಯಯೋಜನೆಗಳು. 12 ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪಂಚಾಯಿತಿ ಸಿಇಒಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಪ್ರತಿಯೊಬ್ಬರ ಜೊತೆ ಸಂವಾದ ನಡೆಸಿರುವ ಅವರು, ಬರ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲು ಸೂಚನೆ ನೀಡಿದ್ದಾರೆ.

   ಬರದ ತೀವ್ರತೆ ಎಷ್ಟಿದೆಯೆಂದರೆ, ಕುಡಿಯುವ ನೀರಿಗೂ ತೊಂದರೆಯಾಗಿದೆ. ಆನರು ಸಂಕಷ್ಟಕ್ಕೀಡಾಗಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಬರಪರಿಹಾರದ ಕಾಮಗಾರಿಗಳು, ಲಭ್ಯವಿರುವ ಹಣಕಾಸು, ಕೈಗೊಳ್ಳಬೇಕಾದ ಕ್ರಮಗಳು, ಅಧಿಕಾರಿಗಳಿಗೆ ಜವಾಬ್ದಾರಿಗಳ ಹಂಚಿಕೆ, ಹೊಣೆಗಾರಿಕೆಗಳ ಬಗ್ಗೆ ಸಂವಾದದಲ್ಲಿ ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆ. ಪ್ರಮುಖ ಅಂಶವೆಂದರೆ, ಯಾವ ಜಿಲ್ಲೆಗಳಲ್ಲೂ ಕುಡಿಯುವ ನೀರಿಗೆ ಹಣಕಾಸಿನ ಕೊರತೆ ಇಲ್ಲ. ಎಲ್ಲ ಜಿಲ್ಲಾಧಿಕಾರಿಗಳ ಬಳಿ 10ರಿಂದ 12 ಕೋಟಿ ರೂ. ಇದೆ. ಇದಲ್ಲದೇ ಇತ್ತೀಚೆಗಷ್ಟೇ ಕುಡಿಯುವ ನೀರಿಗಾಗಿಯೇ 130 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.  ಅಂದರೆ ಬರಿ ಕುಡಿಯುವ ನೀರಿಗಾಗಿಯೇ 130 ಕೋಟಿ ರೂ. ಲಭ್ಯವಿದೆ!

   “ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಕಾರ್ಯದರ್ಶಿಗಳೊಡನೆ ನಿರಂತರ ಸಂಪರ್ಕದಲ್ಲಿರಬೇಕು. ಜಿಲ್ಲಾಧಿಕಾರಿಗಳೇ ಜಿಲ್ಲೆಯ ಎಲ್ಲ ಆಗುಹೋಗುಗಳಿಗೆ ಹೊಣೆಗಾರರಾಗಿರುತ್ತಾರೆ. ಈಲ್ಲೆಯಲ್ಲಿ ಕುಡಿಯುವ ನೀರು, ಮೇವು ಜೊತೆಗೆ ಜನರಿಗೆ ಉದ್ಯೋಗ ಖಾತರಿಗಳನ್ನು ನೀಡಬೇಕಿದ್ದು ಜಿಲ್ಲಾಧೀಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹೊಣೆಗಾರಿಕೆ. ಇದರಲ್ಲಿ ಏನೇ ಲೋಪವಾದರೂ ಜಿಲ್ಲಾಧಿಕಾರಿಗಳೇ ಹೊಣೆ” ಎನ್ನುವ ಮೂಲಕ ಜನರಿಗೆ ತೊಂದರೆಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಡಕ್ ಸೂಚನೆ ನೀಡಿದ್ದಾರೆ. ಇಷ್ಟೇ ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರೂ ಜಿಲ್ಲಾ ಭೇಟಿ, ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸವನ್ನು ಕಡ್ಡಾಯವಾಗಿ ಮಾಡಬೇಕೆಂದು ಹೇಳುವ ಮೂಲಕ ಬರ ಪೀಡಿತ ಜಿಲ್ಲೆಯ ಜನರ ಕಷ್ಟಗಳಿಗೆ ದನಿಯಾಗಿದ್ದಾರೆ.

   ಜನರ ಒಳಿತಿಗಾಗಿ ಸದಾ ತುಡಿಯುವ ಸಿದ್ದರಾಮಯ್ಯನವರು ಬರದ ತೀವ್ರತೆಯನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಜನಸಾಮಾನ್ಯರ ಕ್ಷೇಮಕ್ಕೆ ಮೊದಲ ಆದ್ಯತೆ ನೀಡುವ ಅವರ ಒಳ್ಳೆಯತನವೇ, ಅವರನ್ನಿಂದು ಕರ್ನಾಟಕದ ಹೆಮ್ಮೆಯ ಮುಖ್ಯಮಂತ್ರಿಗಳನ್ನಾಗಿ ಮಾಡಿದೆ.

Advertisements

One thought on “ಬರದ ಬರೆಗೆ ಮುಖ್ಯಮಂತ್ರಿ ಸಾಂತ್ವನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s