ಹಸಿದವನಿಗೆ ಗೊತ್ತು ‘ಅನ್ನಭಾಗ್ಯ’ದ ಬೆಲೆ!

Riceಯಾವುದೇ ದೇಶ ಅಥವಾ ರಾಜ್ಯದಲ್ಲಿ ಸಾಮಾಜಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಅನೇಕ ಅಂಶಗಳನ್ನು ಪರಿಗಣಿಸಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಆಹಾರ ಭದ್ರತೆ ಅಲ್ಲಿನ ಜನಸಾಮಾನ್ಯರ ಸ್ಥಿತಿಗತಿಗಳ ಏರಿಳಿತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಆಹಾರದ ಅನುದಾನ ಹಾಗೂ ಪಡಿತರ ವಿತರಣೆ ವ್ಯವಸ್ಥೆಯು ದೇಶದ ಯಾ ರಾಜ್ಯದ ಆಹಾರ ಅಭದ್ರತೆಯನ್ನು ಅಳೆದು, ಅಭದ್ರೆತೆಯನ್ನು ತೊಡೆದುಹಾಕಲು ಇರುವ ಮೂಲ ಅಸ್ತ್ರಗಳಾಗಿವೆ.

   ಆಹಾರ ಭದ್ರತೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ರಾಜ್ಯ ಸರ್ಕಾರವು ಮೇ 2015ರಂದು ಪರಿಷ್ಕøತ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ರಾಜ್ಯಾಂದ್ಯಂತ ಗುರುತಿಸಲಾಗಿರುವ ಆದ್ಯತೆಯ ಕುಟುಂಬಗಳಿಗೆ ‘ಅನ್ನಭಾಗ್ಯ’ ಯೋಜನೆಯಡಿ ಕರ್ನಾಟಕ ಸರ್ಕಾರವು ಉಚಿತವಾಗಿ ಆಹಾರ ವಿತರಿಸುತ್ತಿದೆ.

   ಇನ್ನು ‘ಅನ್ನಭಾಗ್ಯ’ದಂತಹ ಮಹತ್ತರ-ಪರಿಣಾಮಕಾರಿ-ಉಪಯುಕ್ತ ಯೋಜನೆಯ ಕುರಿತಾಗಿ ಪ್ರತಿಪಕ್ಷಗಳು ಅಪಸ್ವರವೆತ್ತಿರುವುದು, ಯೋಜನೆಯ ಗಂಭೀರತೆ ಹಾಗೂ ದೂರದೃಷ್ಟಿಯ ಕುರಿತು ಅವರ ಅಲ್ಪಜ್ಞಾನ ಎಂದರೆ ತಪ್ಪಾಗಲಾರದು. ‘ಹಸಿದವನಿಗೆ ಗೊತ್ತು ಅನ್ನದ ಬೆಲೆ’ ಎಂಬ ಮಾತಿನಂತೆ ‘ಅನ್ನಭಾಗ್ಯ’ದಂತಹ ಯೋಜನೆಯು ಅದೆಷ್ಟೋ ಹಸಿದ ಕುಟುಂಬಗಳಿಗೆ ನೆಮ್ಮದಿ ನೀಡಿವೆ. ಇಂತಹ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಿದ್ದರಾಮಯ್ಯನವರ ಹಿನ್ನೆಲೆ ಹಾಗೂ ಅವರು ಕಂಡುಂಡ ನೋವುನುರಿಗಳು ಕಾರಣ. ಬಡವರ, ಹಸಿದವರ ಕಷ್ಟಕಾರ್ಪಣ್ಯವನ್ನು ಸ್ವತಃ ಅನುಭವಿಸಿದವರು ಅವರು.

   ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಸಿದ್ದರಾಮಯ್ಯನವರು ಮೈಸೂರಿನ ಸುಬ್ಬರಾಯನ ಕೆರೆ ಬಳಿ ಇರುವ ಕಟ್ಟಡದಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದಿದ್ದರು. ಅದು ಅವರು ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿದ ಸಮಯ. ಅವತ್ತಿನ ಕಷ್ಟಗಳು ಇಂದು ಸಿದ್ದರಾಮಯ್ಯನವರನ್ನು ಬಡವರ ಪರ-ಶೋಷಿತರ ಪರ ಮುಖ್ಯಮಂತ್ರಿಯನ್ನಾಗಿ ರೂಪಿಸಿವೆ. “ಬಡವರ ಕಷ್ಟ ಏನು ಎಂಬುದು ನನಗೆ ಗೊತ್ತು. ಅದನ್ನು ಸ್ವಂತ ಅನುಭವಿಸಿದವನು ನಾನು. ಆದ್ದರಿಂದಲೇ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಮೊದಲಾದ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅನೇಕ ಕಡೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಬಡವರ ಪರ ಎಂದು ಹೇಳಿಕೊಳ್ಳುತ್ತಾ ಭಾಷಣ ಬಿಗಿಯುವವರ ಮಧ್ಯೆ ಕೃತಿಯ ಮೂಲಕ ಮಾಡಿ ತೋರಿಸುತ್ತಿರುವವರು ಸಿದ್ದರಾಮಯ್ಯ.

   ಅಂತ್ಯೋದಯ ಅಥವಾ ಬಿಪಿಎಲ್ ಚೀಟಿ ಹೊಂದಿರುವ ಒಟ್ಟೂ 108.98 ಲಕ್ಷ (1.08 ಕೋಟಿ) ಕುಟುಂಬಗಳು ‘ಅನ್ನಭಾಗ್ಯ’ದ ಫಲಾನುಭವಿಗಳಾಗಿದ್ದಾರೆ. ಅಂತ್ಯೋದಯ ಚೀಟಿ ಇರುವವರಿಗೆ 35 ಕೆ.ಜಿ ಧಾನ್ಯ ಹಾಗೂ ಬಿಪಿಎಲ್ ಚೀಟಿ ಇರುವವರಿಗೆ ಪ್ರತಿ ಯುನಿಟ್‍ಗೆ 5 ಕೆ.ಜಿ ಧಾನ್ಯ ವಿತರಿಸಲಾಗುತ್ತಿದೆ. ಅಪೌಷ್ಠಿಕತೆಯನ್ನು ತೊಡೆದುಹಾಕಲು ಉಚಿತ ಆಹಾರ ವಿತರಣೆ ಒಳ್ಳೆಯ ಯೋಜನೆ. ಆಹಾರ ಅಭದ್ರತೆ ಹಾಗೂ ಹಸಿವನ್ನು ನಿವಾರಿಸುವಲ್ಲಿ ಇದು ಮಹತ್ವದ ಹೆಜ್ಜೆ. ಎಲ್ಲಕ್ಕಿಂತ ಹೆಚ್ಚಾಗಿ ಬಡವರು ಎದುರಿಸುತ್ತಿರುವ ‘ಹೊಟ್ಟೆಪಾಡಿ’ನ ಸಮಸ್ಯೆಗಿದು ರಾಮಬಾಣ. ‘ಬಡವರಿಗೆ ಉಚಿತವಾಗಿ ಅನ್ನವನ್ನು ನೀಡಿ ಅವರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ’ ಎನ್ನುವ ಅರ್ಥಹೀನ ಕೂಗಿಗೆ ಕೆಳಗಿನ ವಿಶ್ಲೇಷಣೆ ಉತ್ತರವಾಗಬಲ್ಲುದು.

   ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳನ್ನು ಗಮನಿಸಿದರೆ ಅಲ್ಲಿನ ಜನ ತಮ್ಮ ಒಟ್ಟೂ ಆದಾಯದ ಶೇಕಡ 8ರಿಂದ 10ರಷ್ಟು ಹಣವನ್ನು ಮಾತ್ರ ಆಹಾರಕ್ಕಾಗಿ ಖರ್ಚು ಮಾಡುತ್ತಾರೆ. ಆದರೆ ಭಾರತದಲ್ಲಿ ಬಡವರು ತಮ್ಮ ಆದಾಯದ ಶೇಕಡ 70ರಷ್ಟನ್ನು ಆಹಾರಕ್ಕಾಗಿ ಖರ್ಚು ಮಾಡುತ್ತಿದ್ದಾರೆ! ತಮ್ಮ ದುಡಿಮೆಯ ಬಹುಪಾಲು ಹಣವನ್ನು ಆಹಾರಕ್ಕಾಗಿಯೇ ಖರ್ಚು ಮಾಡಿದರೆ ಇತರ ಅಗತ್ಯಗಳನ್ನು ಪೂರೈಸಿಕೊಳ್ಳುವುದೆಂತು? ಉಚಿತವಾಗಿ ಆಹಾರ ಪೂರೈಕೆಯಾದಾಗ ಅದಕ್ಕೆ ಬಳಸುವ ಹಣವನ್ನು ತಮ್ಮ ಇತರ ಅಗತ್ಯಗಳಿಗೆ ಬಳಸಿಕೊಂಡು ಜೀವನ ಮಟ್ಟವನ್ನು ಎತ್ತರಿಸಿಕೊಳ್ಳಬಹುದು.

   ಇಂತಹ ಉಪಯುಕ್ತಕಾರಿ ಹಾಗೂ ಪರಿಣಾಮಕಾರಿ ಯೋಜನೆಯ ಧನಾತ್ಮಕತೆಗಿಂತ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಋಣಾತ್ಮಕವಾಗಿ ಬಿಂಬಿಸುತ್ತಿರುವವರಿಗೆ ಏನನ್ನೋಣ? ಬಡವರ ಪರ ಸರ್ಕಾರವಾಗಿ ಸಿದ್ದರಾಮಯ್ಯನವರ ಆಡಳಿತವು ಕೆಲವು ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ರಾಜ್ಯದ ಜನತೆಯ ಪ್ರೀತ್ಯಾಧಾರಗಳಿಗೆ ಕಾರಣವಾಗಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s