ಸಿದ್ದರಾಮಯ್ಯ ಎಂಬ ಆರ್ಥಿಕ ತಜ್ಞ

02a

2016-2017ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಜನರ ನಿರೀಕ್ಷೆಗಳೂ ಗರಿಗೆದರತೊಡಗಿವೆ. ಸಾಮಾಜಿಕ ನ್ಯಾಯ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ತಮ್ಮ ನಡೆಯಲ್ಲಿ ತೋರಿಸುತ್ತಿರುವವರು ಸಿದ್ದರಾಮಯ್ಯ. ಅದಕ್ಕೆ ಪೂರಕವಾಗಿ ಕಳೆದ ಬಾರಿಯ ಬಜೆಟ್‍ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚಿನ ಒತ್ತು ನೀಡಿದ್ದರು. ಹಣಕಾಸು ಇಲಾಖೆಯನ್ನು ಪ್ರಾರಂಭದಿಂದಲೂ ತಮ್ಮ ಬಳಿಯೇ ಇರಿಸಿಕೊಂಡಿರುವ ಅವರು, ಯಾವತ್ತಿಗೂ ಜನಸಾಮಾನ್ಯರ ಆಶೋತ್ತರಗಳಿಗೆ ಬೆನ್ನುಮಾಡಿದವರಲ್ಲ. ಈ ಎಲ್ಲ ಕಾರಣಗಳು ಹಾಗೂ ಕಳೆದ ಬಾರಿಯ ಬಜೆಟ್‍ನ ಯಶಸ್ಸು ಈ ಬಾರಿಯ ರಾಜ್ಯ ಬಜೆಟ್‍ನೆಡೆಗೆ ಕುತೂಹಲ ಮೂಡಿಸಿವೆ.

   ಸಿದ್ದರಾಮಯ್ಯ ಅವರು ಒಬ್ಬ ಒಳ್ಳೆಯ ಆರ್ಥಿಕ ತಜ್ಞರೂ ಹೌದು. ಈ ಮೊದಲು ತಾವು ನಿಭಾಯಿಸಿದ ಹಣಕಾಸು ಇಲಾಖೆಯಲ್ಲಿ ಅದನ್ನು ಸಾಬೀತುಪಡಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 10 ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆ ಅವರದ್ದು. 2004-05ರ ಸಾಲಿನಲ್ಲಿ ಹಣಕಾಸು ಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ದೇಶದಲ್ಲೇ ಮೊದಲ ಬಾರಿಗೆ ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದರು. ಈ ಬಾರಿಯೂ ಸಹ ಸಾಮಾಜಿಕ ನ್ಯಾಯ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆ ಬಜೆಟ್‍ನಲ್ಲಿ ಪ್ರತಿಫಲಿಸಲಿದೆ ಎನ್ನುವ ಸುಳಿವನ್ನು ಅವರು ತಮ್ಮ ಮಾತುಗಳಲ್ಲಿ ನೀಡಿದ್ದಾರೆ.

   ಒಬ್ಬ ಸಮರ್ಥ ನಾಯಕ ರಾಜ್ಯದ ಹಣಕಾಸಿನ ಸ್ಥಿತಿಯನ್ನು ಹೇಗೆ ಉತ್ತಮವಾಗಿರಿಸಬಹುದು ಎನ್ನುವುದಕ್ಕೆ ಸಿದ್ದರಾಮಯ್ಯ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ. ಕಳೆದ ಮೂರು ವರ್ಷಗಳ ಬಜೆಟ್ ಅನ್ನು ಕೂಲಂಕುಷವಾಗಿ ಪರಿಶೀಲಿಸಿದರೆ ಮೇಲಿನ ಮಾತು ವಿಧಿತವಾಗುತ್ತದೆ. ರಾಜ್ಯದ ಒಟ್ಟೂ ಆಂತರಿಕ ಉತ್ಪನ್ನ (ಜಿಎಸ್‍ಡಿಪಿ) ಮತ್ತು ತೆರಿಗೆ ಅನುಪಾತ 2010-11ರ ನಂತರದಲ್ಲಿ ಶೇಕಡ 10ರಷ್ಟಿತ್ತು. ಇದು ದೇಶದಲ್ಲೇ ಹೆಚ್ಚು ಎನ್ನುವುದನ್ನು ಗಮನಿಸಲೇಬೇಕಾದ ವಿಷಯ. ಇನ್ನು ರಾಜ್ಯದ ಆದಾಯವನ್ನು ಗಮನಿಸುವುದಾದರೆ 2013-14ರಲ್ಲಿ ಶೇಕಡ 16ರಷ್ಟು, 2014-15ರಲ್ಲಿ ಶೇಕಡ 12ರಷ್ಟು ಹೆಚ್ಚಳ ನಮೂದಿಸಿವೆ. ಅಂದರೆ ದೇಶದ ಸರಾಸರಿಗಿಂತ ಹಾಗೂ ಹಣದುಬ್ಬರ ದರದ ಪ್ರಮಾಣಕ್ಕಿಂತ ಜಾಸ್ತಿ.

   ಸಿದ್ದರಾಮಯ್ಯನವರು ಆರ್ಥಿಕ ಜವಾಬ್ದಾರಿಯನ್ನು ಸಮರ್ಥರಾಗಿ ನಿಭಾಯಿಸಲು ಕಾರಣ ಅವರು ಕೈಗೊಂಡ ಕ್ರಮಗಳು. ಹಿಂದಿನ ಮೂರು ವರ್ಷಗಳಲ್ಲಿ ತೆಗೆದುಕೊಂಡ ತೆರಿಗೆ ಮತ್ತು ಸುಂಕ ವಸೂಲಾತಿ ಕ್ರಮಗಳು, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಇವೆಲ್ಲವೂ ಆದಾಯದ ಹೆಚ್ಚಳಕ್ಕೆ ಕಾರಣವಾದವು. ಉಳಿದ ಎಲ್ಲಾ ರಾಜ್ಯಗಳಿಗಿಂತ ಜಾಗತಿಕ ಆರ್ಥಿಕ ಹಿಂಜರಿತವನ್ನು ಸಮರ್ಥವಾಗಿ ಎದುರಿಸಿದ ರಾಜ್ಯವೆಂದರೆ ಕರ್ನಾಟಕ. ಇದು ಸಿದ್ದರಾಮಯ್ಯನವರ ದೂರದರ್ಶಿತ್ವಕ್ಕೆ ಹಿಡಿದ ಕೈಗನ್ನಡಿ.

   ಈ ಎಲ್ಲಾ ಅಂಶಗಳು ಇದೀಗ ಮಂಡನೆಯಾಗಲಿರುವ 2016-17 ನೇ ಸಾಲಿನ ಬಜೆಟ್‍ನೆಡೆಗೆ ಕುತೂಹಲದಿಂದ ಎದುರು ನೋಡುವಂತೆ ಮಾಡಿದೆ. ಹಣಕಾಸು ನಿರ್ವಹಣೆಯಲ್ಲಿ ತಮ್ಮ ಪಾತ್ರವೇನು ಎನ್ನುವುದನ್ನು ಕಳೆದ ಮೂರು ವರ್ಷಗಳಲ್ಲಿ ಫಲಿತಾಂಶದ ಮೂಲಕ ತೋರಿಸಿಕೊಟ್ಟಿರುವ ಮುಖ್ಯಮಂತ್ರಿಗಳು, ಈ ಬಾರಿಯೂ ಸಹ ಪಕ್ಕಾ ಲೆಕ್ಕಾಚಾರದ ನಡೆಯನ್ನಿಡಲಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

Advertisements

One thought on “ಸಿದ್ದರಾಮಯ್ಯ ಎಂಬ ಆರ್ಥಿಕ ತಜ್ಞ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s